ಬಂಟ್ವಾಳ ; ತಾಲೂಕಿನ ಕಡೇಶ್ವಾಲ್ಯ ಗ್ರಾಮದ ಬದಿಗುಡ್ಡೆಯ ಗ್ರಾಮ ದೈವ ರಕ್ತೇಶ್ವರಿ ಮೈಸಂದಾಯ, ಮಹಾಕಾಳಿ ದೈವಸ್ಥಾನದಲ್ಲಿ ನಾಗ ಪ್ರತಿಷ್ಠೆ,ಧರ್ಮ ದೈವಗಳ ಪ್ರತಿಷೆ, ಬ್ರಹ್ಮ ಕಲಶೋತ್ಸವ ಹಾಗೂ ನೇಮೋತ್ಸವವು ಮಾರ್ಚ್ ೧೮ ರಿಂದ ೨೨ರವರೆಗೆ ನಡೆಯಲಿದೆ ಎಂದು ಆಡಳಿತ ಸಮಿತಿ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ. ಸೋಮವಾರ ಸಂಜೆ ಬಿಸಿರೋಡಿನ ಪ್ರೆಸ್ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ೭ಲಕ್ಷ ರೂ ಅಂದಾಜು ವೆಚ್ಚದಲ್ಲಿ ದೈವಗಳಿಗೆ ಸ್ಥಾನ ನಿರ್ಮಾಣ ಸೇರಿದಂತೆ ಹಲವು ಕೆಲಸಕಾರ್ಯಗಳನ್ನು ನಡೆಸಲಾಗಿದೆ ಎಂದರು. ಅತೀ ಎತ್ತರದಲ್ಲಿರುವ ದೈವಸ್ಥಾನ ಇದಾಗಿದ್ದು, ಗ್ರಾಮಸ್ಥರ ನೆರವು ಹಾಗೂ ಸಹಕಾರದೊಂದಿಗೆ ಪ್ರತೀ ಕೆಲಸಕಾರ್ಯಗಳು ನಡೆಯುತ್ತಿದೆ ಎಂದರು. ಮಾ.೧೯ ರಂದು ಶುಕ್ರವಾರ ನಾಗಪ್ರತಿಷ್ಠೆ ನಡೆಯಲಿದ್ದು, ಬಳಿಕ ಜರಗುವ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಯವರು ಆಶೀರ್ವಚನ ನೀಡಲಿದ್ದು,ಮಾ.೨೨ರಂದು ಬೆಳಿಗ್ಗೆ ಬ್ರಹ್ಮಕಲಶೋತ್ಸವ ನಡೆದು ಬಳಿಕ ನಡೆಯುವ ಧಾರ್ಮಿಕಸಭಾ ಕಾರ್ಯಕ್ರಮದಲ್ಲಿ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಬಾಬು ಮುಂಗೂರು, ಉತ್ಸವ ಸಮಿತಿ ಮೇಲ್ವೀಚಾರಕರಾದ ಸಿ.ಎಂ.ಶ್ಯಾಮ್ ಪ್ರಸಾದ್ ಶಾಸ್ತ್ರಿ, ಲಕ್ಷ್ಮೀಕಾಂತ ಅಳಕೆ, ಪರಮುಖರಾದ ಸೀತಾರಾಮ ಭಟ್,ವಸಂತ ಪೂಜಾರಿ ನಡ್ಯೋಲು ಮೊದಲಾದವರು ಉಪಸ್ಥಿತರಿದ್ದರು.